ಮಂಗಳೂರು, ಆ.11: ನಂತೂರು ಜಂಕ್ಷನ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ನಾಲ್ಕು ಮಾರ್ಗದಲ್ಲಿ ನಿರ್ಮಿಸಿರುವ ಸರ್ಕಲ್ ಅವೈಜ್ಞಾನಿಕವಾಗಿದ್ದು ಇದರಿಂದ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ನಿರಂತರ ಟ್ರಾಫಿಕ್ ಜಾಮ್ ಕಿರಿಕಿರಿಯನ್ನು ಸಾರ್ವಜನಿಕರು ಅನುಭವಿಸುವಂತಾಗಿದೆ. ಆದುದರಿಂದ ನಂತೂರು ಸರ್ಕಲ್ನ್ನು ವೈಜ್ಞಾನಿಕವಾಗಿ ಪೂನಃ ನಿರ್ಮಿಸುವ ಇಲ್ಲವೆ ಸುಗಮ ಸಂಚಾರಕ್ಕೆ ಅನುವಾಗುವಂತೆ ಬದಲಾವಣೆ ಮಾಡುವ ಬಗ್ಗೆ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಸರ್ಕಿಟ್ ಹೌಸ್ ನ ಲ್ಲಿ ಹೆದ್ದಾರಿ ಪ್ರಾದಿಕಾರದ ಪ್ರೊಜೆಕ್ಟ್ ಮ್ಯಾನೇಜರ್ ಶ್ರೀರಾಮ್ ಮಿಶ್ರಾ ಹಾಗೂ ಟ್ರಾಫಿಕ್ ಎಸಿಪಿ ಮತ್ತು ಮನಪಾ ಅಧಿಕಾರಿಗಳೊಂದಿಗೆ ನಂತೂರು ಸರ್ಕಲ್ ಸಮಸ್ಯೆ ಹಾಗೂ ಹೆದ್ದಾರಿಯಲ್ಲಿ ಮಳೆ ನೀರು ನಿಂತು ವಾಹನ ಸವಾರರಿಗೆ ಸಮಸ್ಯೆಯಾಗುತ್ತಿರುವ ವಿಷಯವಾಗಿ ಅವರು ಸಮಾಲೋಚನೆ ನಡೆಸಿದರು.
ನಂತೂರು ಸರ್ಕಲ್ ನಲ್ಲಿ ರಾ. ಹೆದ್ದಾರಿಗೆ ಅಂಡರ್ ಪಾಸ್ ಸೇತುವೆ ನಿರ್ಮಾಣದ 58 ಕೋಟಿ. ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಅದರ ಟೆಂಡರ್ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ ಎಂದು ಹೆದ್ದಾರಿ ಪ್ರಾದಿಕಾರದ ಪ್ರೊಜೆಕ್ಟ್ ಮ್ಯಾನೇಜರ್ ಶ್ರೀರಾಮ್ ಮಾಹಿತಿ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಐವನ್ ಡಿಸೋಜಾರವರು ಯೋಜನೆ ಕಾರ್ಯಗತಗೊಳ್ಳಲು ಸಾಕಷ್ಟು ಸಮಯ ತಗಲುತ್ತದೆ ಅಲ್ಲಿಯ ವರೆಗೆ ಜನರ ಸಮಸ್ಯೆ ನಿವಾರಿಸುವ ಕಾರ್ಯ ಆಗಬೇಕಿದೆ. ಮಂಗಳೂರು ಮಹಾನಗರ ಪಾಲಿಕೆ ಮತ್ತು ಮಂಗಓಲೂರು ನಗರ ಪೊಲೀಸರ ಸಹಕಾರ ಪಡೆದು ಕೂಡಲೇ ನಂತೂರು ಸರ್ಕಲ್ನ್ನು ಟ್ರಾಫಿಕ್ ಜಾಮ್ ಫ್ರೀ ಆಗುವಂತೆ ಪರಿವರ್ತಿಸಿ ಎಂದು ಸೂಚಿಸಿದರು.
ಮುಂದಿನ ಒಂದು ತಿಂಗಳಲ್ಲಿ ಒಂದು ಲಕ್ಷ ರೂ. ವೆಚ್ಚದಲ್ಲಿ ನಂತೂರು ಸರ್ಕಲ್ ಪರಿವರ್ತನೆಯ ಕಾರ್ಯ ಮಾಡಲಾಗುತ್ತದೆ ಎಂದು ಶ್ರೀರಾಮ್ ಮಿಶ್ರಾ ತಿಳಿಸಿದರು.
ಮನಪಾ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಹೆದ್ದಾರಿ ಫ್ಲೈಓವರ್ ರಸ್ತೆಯ ಪಕ್ಕದ ಸರ್ವಿಸ್ ರಸ್ತೆಗಳು ಹದಗೆಟ್ಟ ಬಗ್ಗೆ ಐವನ್ ಡಿಸೋಜಾರವರು ಗಮನ ಸೆಳೆದಿದ್ದು ಇದಕ್ಕೆ ಶ್ರೀರಾಮ್ ಮಿಶ್ರಾ ರವರು 26 ಕೋಟಿ ರೂ. ವೆಚ್ಚದಲ್ಲಿ ಸರ್ವಿಸ್ ರಸ್ತೆಗಳ ನವೀಕರಣ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮಳೆ ನೀರು ಸರಾಗವಾಗಿ ಹರಿದು ಹೋಗದೆ ಹೆದ್ದಾರಿಯಲ್ಲಿ ಮೊಣಕಾಲೆತ್ತರ ನಿಲ್ಲುತ್ತಿದೆ ಇದು ರಾತ್ರಿ ವೇಳೆಯಲ್ಲಿ ಬರುವ ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿ, ಅಪಾಯ ಸಂಭವಿಸಿದ ಬಳಿಕ ಯೋಚಿಸುವುದಕ್ಕಿಂತ ಹೆದ್ದಾರಿಯಲ್ಲಿ ನೀರು ನಿಲ್ಲದಂತೆ ಈಗಲೇ ಕ್ರಮ ತೆಗೆದುಕೊಳ್ಳಿ ಎಂದು ಐವನ್ ಡಿಸೋಜಾ ಸೂಚಿಸಿದರು.